dcsimg
Image of orange jasmine
Creatures » » Plants » » Dicotyledons » » Rue Family »

Orange Jasmine

Murraya paniculata (L.) Jacq.

ಕಾಡು ಕರಿಬೇವು ( Kannada )

provided by wikipedia emerging languages

ಕಾಡು ಕರಿಬೇವು ನಿತ್ಯ ಹರಿದ್ವರ್ಣದ ಹಸಿರು ಪೊದೆಸಸ್ಯ.

ವೈಜ್ಞಾನಿಕ ವರ್ಗೀಕರಣ

ರೂಟೇಸೀ ಕುಟುಂಬದ ಸಸ್ಯ. ವೈಜ್ಞಾನಿಕ ನಾಮ ಮುರ್ರಾಯ ಎಕ್ಸೋಟಿಕ ಅಥವಾ ಮುರ್ರಾಯ ಪನಿಕುಲೇಟ.[೧]

ಭೌಗೋಳಿಕ ಹಂಚಿಕೆ

ಭಾರತದ ಮೂಲವಾಸಿಯಾದರೂ ಏಷಿಯಾ ಖಂಡದ ಉಷ್ಣವಲಯ ಕಾಡುಗಳಲ್ಲಿ ಕಂಡುಬರುತ್ತದೆ.ಚೀನಾ,ಆಸ್ಟ್ರೇಲಿಯಗಳಲ್ಲಿ ಕೂಡಾ ಇದೆ.

ಲಕ್ಷಣಗಳು

 src=
M. paniculata in flower pots
 src=
Fruit of the Chinese box

ಸುಮಾರು ೨೦ ಆಡಿಗಳ ವರೇಗೆ ಬೆಳೆಯುವ ಒಂದು ಪೊದೆ ಸಸ್ಯ.ವರ್ಷವಿಡೀ ಹೂ ಬಿಡುತ್ತದೆ.ಹೊಳಪುಳ್ಳ ರೋಮರಹಿತ ಎಲೆಗಳು.ರಸಭರಿತ ಚತುರ್ರಸ-ಅಂಡಾಕಾರದ ಹಣ್ಣುಗಳು ಕೆಂಪು ಅಥವಾ ಕೇಸರಿ ಬಣ್ಣವಿರುತ್ತದೆ.[೧]

ಉಪಯೋಗಗಳು

ತೋಟಗಳಲ್ಲಿ ಹಸಿರು ಎಲೆಗಳಿಗಾಗಿಯೂ,ಸುವಾಸನಾಯುಕ್ತ ಹೂವುಗಳಿಗಾಗಿಯೂ ಬೆಳೆಸುತ್ತಾರೆ.ಎಲ್ಲಾ ವಿಧದ ಮಣ್ಣುಗಳಲ್ಲಿಯೂ ಬೆಳೆಯುತ್ತದೆ.ಉರುವಲಿಗಾಗಿಯೂ ಬೆಳೆಸುವುದುಂಟು.

ಔಷಧೀಯ ಗುಣಗಳು

  1. ಎಲೆಗಳಲ್ಲಿ ಔಷಧೀಯ ಗುಣಗಳಿರುವುದರಿಂದ ಪಾರಂಪರಿಕ ಔಷಧ ಪದ್ಧತಿಯಲ್ಲಿ ಬಳಕೆಯಲ್ಲಿದೆ.
  2. ಕೆಟ್ಟ ಕೊಬ್ಬ(ಕೊಲೆಸ್ಟರಾಲ್)ನ್ನು ನಿವಾರಿಸುತ್ತದೆ.
  3. ಯಕೃತ್ತನ್ನು ಸಂರಕ್ಷಿಸಿ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
  4. ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.
  5. ತಲೆಕೂದಲಿನ ಬೆಳವಣಿಗೆಗೆ ಸಹಾಯಕ.

ಉಲ್ಲೇಖಗಳು

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಕಾಡು ಕರಿಬೇವು: Brief Summary ( Kannada )

provided by wikipedia emerging languages

ಕಾಡು ಕರಿಬೇವು ನಿತ್ಯ ಹರಿದ್ವರ್ಣದ ಹಸಿರು ಪೊದೆಸಸ್ಯ.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು