dcsimg

ತಿಲಪುಷ್ಪಿ ( Kannada )

provided by wikipedia emerging languages

ತಿಲಪುಷ್ಪವು ಒಂದು ಔಷಧೀಯ ಗುಣವುಳ್ಳ ಸಸ್ಯವಾಗಿದೆ. ಇದರ ವೈಜ್ಞಾನಿಕ ಹೆಸರು ಡಿಜಿಟೇಲಿಸ್ ಪರ್ಪುರಿಯ(Digitalis purpurea). ಲಾಮಿಯಲೆಸ್ ಎಂಬ ಗಣಕ್ಕೆ ಸೇರಿದ ತಿಲಪುಷ್ಪಿಯು ಪ್ಲಾಂಟಜಿನೇಸಿಯ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ[೧].

ಸಸ್ಯ ವಿವರಣೆ

ಇದರ ಹೂವು ಎಳ್ಳಿನ ಹೂವನ್ನು ಹೋಲುವುದರಿಂದ ಇದಕ್ಕೆ ತಿಲಪುಷ್ಪಿ ಎಂಬ ಹೆಸರು ಬಂದಿದೆ. ಇದನ್ನು ವಾರ್ಷಿಕ ಬೆಳೆಯಾಗಿ ಬೆಳೆಯಲಾಗುತ್ತದೆ. ಇದರ ಗಿಡವು ೧.೨ ಮೀಟರ್ ಎತ್ತರದವರೆಗೆ ಬೆಳೆಯುತ್ತದೆ. ಎಲೆಯು ೧೫-೨೦ ಸೆಂ.ಮೀ. ಉದ್ದವಾಗಿದ್ದು ಅಂಡಾಕಾರದಿಂದಿರುತ್ತದೆ. ಎಲೆಗಳು ರೋಮಗಳಿಂದ ಕೂಡಿರುತ್ತದೆ.

ಇತರ ಭಾಷೆಗಳಲ್ಲಿನ ಹೆಸರುಗಳು

  • ಸಂಸ್ಕೃತ: ಹೃತ್ಪತ್ರಿ, ತಿಲಪುಷ್ಪಿ[೨]
  • ಹಿಂದಿ: ತಿಲಪುಷ್ಪಿ
  • ಇಂಗ್ಲೀಷ್:ಫೊಕ್ಸ್‌ಗ್ಲೋವ್ (Foxglove), Common foxglove, Purple foxglove, Lady’s glove
  • ಮಲಯಾಳಂ: ತಿಲಪುಷ್ಪಿ, ಹೃದ್ಪತ್ರಿ

ಉಪಯೋಗಗಳು

 src=
ತಿಲಪುಷ್ಪಿ drawings by Franz Köhler
  • ತಿಲಪುಷ್ಪಿಯನ್ನು ಹೃದಯದ ಖಾಯಿಲೆಗಲ ನಿವಾರಣೆಗಾಗಿ ಉಪಯೋಗಿಸುತ್ತಾರೆ[೩].

ಇದರ ಎಲೆಯನ್ನು ಕತ್ತರಿಸಿ ನಂತರ ೬೦ಡಿಗ್ರಿ ಸೆ. ಉಷ್ಣಾಂಶದಲ್ಲಿ ಒಣಗಿಸಿ ಮಾಡಿದ ರಸವನ್ನು ಉಪಯೋಗಿಸಬೇಕು.

ಈ ದ್ರವ್ಯವು ಹೃದಯದ ಕರೋನರಿ ಎಂಬ ನಾಳದಲ್ಲಿ ಹೆಚ್ಚು ರಕ್ತ ಪ್ರವಹಿಸುವಂತೆ ಮಾಡುತ್ತದೆ. ಇದರಿಂದಾಗಿ ಹೃದಯದ ಕ್ರಿಯೆಯು ಸರಿಯಾಗಿ ನಡೆಯುತ್ತದೆ. ಮೂತ್ರ ಜನಕಾಂಗದಲ್ಲಿ ಹೆಚ್ಚಿನ ಪ್ರಮಾಣದ ರಕ್ತವನ್ನು ಹರಿಯುವಂತೆ ಮಾಡುವ ತಿಲಪುಷ್ಪಿ ಮೂತ್ರಲ ಗುಣವನ್ನು ಹೊಂದಿದೆ.

  • ಗಾಯಗಳಿಗೆ ಹಾಗೂ ಸುಟ್ಟ ಗಾಯಗಳಿಗೆ ಇದನ್ನು ಲೇಪಿಸಬಹುದಾಗಿದೆ.

ಉಲ್ಲೇಖಗಳು

  1. https://books.google.co.in/books?id=njLtCAAAQBAJ&pg=PA191&lpg=PA191&dq=tilapushpi+uses&source=bl&ots=dFMJ_elc5q&sig=SJSmXiVxmBcFApuSZK2TsxA8_M8&hl=en&sa=X&ved=0ahUKEwjA-PftosbQAhUGN48KHTiyAqUQ6AEIIDAB#v=onepage&q=tilapushpi%20uses&f=false
  2. http://www.toxicologycentre.com/tilapushpi-%E0%B4%A4%E0%B4%BF%E0%B4%B2%E0%B4%AA%E0%B5%81%E0%B4%B7%E0%B5%8D%E0%B4%AA%E0%B4%BF/
  3. http://www.medicinalplantsindia.com/foxglove.html

ಬಾಹ್ಯಸಂಪರ್ಕಗಳು

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ತಿಲಪುಷ್ಪಿ: Brief Summary ( Kannada )

provided by wikipedia emerging languages

ತಿಲಪುಷ್ಪವು ಒಂದು ಔಷಧೀಯ ಗುಣವುಳ್ಳ ಸಸ್ಯವಾಗಿದೆ. ಇದರ ವೈಜ್ಞಾನಿಕ ಹೆಸರು ಡಿಜಿಟೇಲಿಸ್ ಪರ್ಪುರಿಯ(Digitalis purpurea). ಲಾಮಿಯಲೆಸ್ ಎಂಬ ಗಣಕ್ಕೆ ಸೇರಿದ ತಿಲಪುಷ್ಪಿಯು ಪ್ಲಾಂಟಜಿನೇಸಿಯ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು