dcsimg

ಕಿಯಾ ಗಿಣಿ ( Kannada )

provided by wikipedia emerging languages

ಕಿಯಾ ಗಿಣಿನ್ಯೂಜಿಲ್ಯಾಂಡ್ ದ್ವೀಪ ಸಮೂಹದಲ್ಲಿ ಸಾಮಾನ್ಯವಾಗಿ ಕಂಡು ಬರುವ ಗಿಣಿ ಜಾತಿಯ ಹಕ್ಕಿ.

ವೈಜ್ಞಾನಿಕ ವರ್ಗೀಕರಣ

ಗಿಣಿಗಳನ್ನೊಳಗೊಂಡ ಸಿಟ್ಟಾಸಿಫಾರ್ಮೀಸ್ ಗಣದ ಸಿಟ್ಟಾಸಿಡೀ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಹಕ್ಕಿ. ಇದರ ವೈಜ್ಞಾನಿಕನಾಮ ನೆಸ್ಟರ್ ನೊಟಾಬಿಲಿಸ್.

ಭೌಗೋಳಿಕ ಹರಡುವಿಕೆ

ನ್ಯೂಜಿಲ್ಯಾಂಡ್‍ನ ಆಲ್ಪೈನ್ ಪರ್ವತ ಪ್ರದೇಶ ಇದರ ಸ್ವಾಭಾವಿಕ ತಾಣ. ಎತ್ತರವಾದ ಪರ್ವತ ಪ್ರದೇಶಗಳಲ್ಲಿನ ಕಲ್ಲುಪೊಟರೆಗಳಲ್ಲಿ ಗೂಡು ಕಟ್ಟಿಕೊಂಡು ವಾಸಿಸುತ್ತದೆ.

ಲಕ್ಷಣಗಳು

 src=
Orange feathers can be seen under the wing during flight
 src=
Kea in flight
 src=
Juveniles have yellow eyerings and cere, an orange-yellow lower beak, and grey-yellow legs

ಕಿಯಾ ಗಿಣಿಗಳು ಸುಮಾರು ೧೯ ಇಂಚಿನಷ್ಟು ಉದ್ದವಿದ್ದು ಸುಮಾರು ಒಂದು ಕಿಲೋ ತೂಕವಿರುತ್ತವೆ[೨] .ಗಂಡು ಹಕ್ಕಿ ಹೆಣ್ಣಿಗಿಂತ ಹೆಚ್ಚು ಉದ್ದವಿರುತ್ತವೆ. ಗಂಡಿನ ಕೊಕ್ಕು ಹೆಣ್ಣಿನ ಕೊಕ್ಕಿಗಿಂತ ೧೨ರಿಂದ ೧೪ ಶೇಕಡಾ ಉದ್ದವಿರುತ್ತದೆ.[೩] ಇದು ಹೆಚ್ಚು ಕಡಿಮೆ ಕಾಗೆಯಷ್ಟು ದೊಡ್ಡದು. ಗಿಣಿಗಳಲ್ಲಿರುವಂತೆ ಬಾಗಿರುವ ಬಲವಾದ ಕೊಕ್ಕು ಇದೆ. ಮೈಬಣ್ಣ ಕಂದುಮಿಶ್ರಿತ ಹಸಿರು. ಗಿಣಿಗಳಂತೆಯೇ ಹಣ್ಣು, ಮೊಗ್ಗು, ಹುಳು, ಕೀಟ ಮುಂತಾದುವನ್ನು ತಿಂದು ಜೀವಿಸುತ್ತದೆ. ಚಳಿಗಾಲದಲ್ಲಿ ಪರ್ವತದ ಅತೀವ ಚಳಿಯನ್ನು ಸಹಿಸಲಾರದೆ ಕಣಿವೆಗಳಿಗೆ ಇಳಿದುಬರುತ್ತದೆ. ಆಗ ಕೆಲವೊಮ್ಮೆ ಕುರಿಗಳ ಬೆನ್ನನ್ನು ಕುಕ್ಕಿ ಮಾಂಸವನ್ನು ಬಗಿದು ತಿನ್ನುವುದುಂಟು. ಇದರಿಂದಾಗಿ ಮಾನವನಿಗೆ ಈ ಹಕ್ಕಿಯನ್ನು ಕಂಡರೆ ಆಗದು.

ಉಲ್ಲೇಖಗಳು

  1. BirdLife International (2012). "Nestor notabilis". IUCN Red List of Threatened Species. Version 2013.2. International Union for Conservation of Nature. Retrieved 26 November 2013.
  2. CRC Handbook of Avian Body Masses by John B. Dunning Jr. (Editor). CRC Press (1992), ISBN 978-0-8493-4258-5.
  3. Bond, A. B.; Wilson, K. J.; Diamond, J. (1991). "Sexual Dimorphism in the Kea Nestor notabilis". Emu. 91 (1): 12–19. doi:10.1071/MU9910012.

ಬಾಹ್ಯ ಸಂಪರ್ಕಗಳು

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಕಿಯಾ ಗಿಣಿ: Brief Summary ( Kannada )

provided by wikipedia emerging languages

ಕಿಯಾ ಗಿಣಿನ್ಯೂಜಿಲ್ಯಾಂಡ್ ದ್ವೀಪ ಸಮೂಹದಲ್ಲಿ ಸಾಮಾನ್ಯವಾಗಿ ಕಂಡು ಬರುವ ಗಿಣಿ ಜಾತಿಯ ಹಕ್ಕಿ.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು